a, an ಸ್ವರಾಘಾತವಿಲ್ಲದಿರುವಾಗ ಅ, ಅನ್‍; ಸ್ವರಾಘಾತವಿರುವಾಗ ಏ, ಆನ್‍
ಗುಣವಾಚಕ

(ಅನಿರ್ದೇಶವಾಚಕ)

  1. ಒಂದು; ಒಬ್ಬ; ಯಾವುದಾದರೂ.
  2. ಒಂದಾನೊಂದು; ಒಬ್ಬಾನೊಬ್ಬ: once upon a time there lived a king ಒಂದಾನೊಂದು ಕಾಲದಲ್ಲಿ ಒಬ್ಬಾನೊಬ್ಬ ದೊರೆ ಇದ್ದ.
  3. ಅಂಥ; ಅವನಂಥ; ಅದರಂಥ; ಆ ತರಹದ: a Daniel ಒಬ್ಬ ಡೇನಿಯಲ್‍; ಡೇನಿಯಲ್‍ನಂಥವನು.
  4. ಒಂದೇ ಒಂದು; ಒಂದು ಸಹ: could not see a thing ಒಂದೇ ಒಂದು ವಸ್ತುವನ್ನೂ ನೋಡಲಾಗಲಿಲ್ಲ. to reduce unemployment at a stroke ಒಂದೇ ಏಟಿನಲ್ಲಿ ನಿರುದ್ಯೋಗವನ್ನು ತಗ್ಗಿಸಲು.
  5. ಜಾತ್ಯೇಕವಚನವನ್ನು ಸೂಚಿಸುವಾಗ: a cow is an animal (= cows are animals) ಹಸು ಒಂದು ಪ್ರಾಣಿ.
  6. ಯಾವುದಾದರೂ ಒಂದರ ಅಂಶವನ್ನು ಸೂಚಿಸುವಾಗ: half a rupee ಅರ್ಧ ರೂಪಾಯಿ. half an hour ಅರ್ಧ ಘಂಟೆ.
  7. how, so, as, too ಇವುಗಳಲ್ಲಿ ಒಂದರ ಬಳಿಕ ಗುಣವಾಚಕ ಬಂದಾಗ: how good a man ಎಂಥ ಒಳ್ಳೆಯ ಮನುಷ್ಯ. so pretty a girl ಎಂಥ ಚಂದದ ಹುಡುಗಿ. as efficient a secretary as you desire ನೀವು ಬಯಸುವಷ್ಟು ದಕ್ಷನಾದ ಕಾರ್ಯದರ್ಶಿ. it is too difficult a task ಅದು ಅತಿ ಕಷ್ಟದ ಕೆಲಸ.
  8. ಒಂದೇ ತರಹದ, ಮಟ್ಟದ: all of a size ಎಲ್ಲ ಒಂದೇ ಗಾತ್ರದ.
  9. ಪ್ರತಿಯೊಂದಕ್ಕೂ; ಪ್ರತಿಯೊಂದರಲ್ಲಿಯೂ: at three miles an hour ಗಂಟೆಗೆ ಮೂರು ಮೈಲಿಗಳಂತೆ. Rs.40 a year ವರ್ಷಕ್ಕೆ ೪೦ ರೂ.ಗಳು twice a day ದಿನಕ್ಕೆ ಯಾ ದಿನದಲ್ಲಿ ಎರಡು ಬಾರಿ.
  10. ಯಾರೋ ಒಬ್ಬರು: a Mr. Brown ಯಾರೋ ಒಬ್ಬ ಬ್ರೌನ್‍.